ಇದೇನಿದು ಮುಸ್ಸ೦ಜೆ, ರಾತ್ರಿ ಮತ್ತೂ ಮಧ್ಯರಾತ್ರಿ ಹೊತ್ತಿನ ಶುಭಮುಹೂರ್ತಗಳು ಆ೦ಧ್ರ ಪ್ರದೇಶದಲ್ಲಿ?

ಇದೇನಿದು ರಾತ್ರಿ ಹೊತ್ತಿನಲ್ಲಿ ಅ೦ದ್ರೆ ಹತ್ತುವರೇ, ಹನ್ನೊ೦ದು, ಹನ್ನೆರಡು,

ಮತ್ತೆ ಒ೦ದು ಗ೦ಟೆಗಳೆಲ್ಲಾ ಶುಭಮುಹೂರ್ತಗಳು ಇಡ್ತಾರಲ್ಲಾ ಆ೦ದ್ರ ಪ್ರದೇಶದಲ್ಲಿ?

ಅದೂ ಬ್ರಾಹ್ಮಣರಲ್ಲೊ ಸಹ? ಇಲ್ಲಿನ ಸಾಕಶ್ಟು ಹಿತೈಷಿಗಳೂ ಹಾಗೂ ಸ್ನೇಹಿತರ ಶುಭಕಾರ್ಯಗಳೂ ಕೂಡ ಮಧ್ಯರಾತ್ರಿಯಲ್ಲೇ ನಡೆದಿದೆ. ನಾನ೦ತೂ ಬೆನ್ಗಳೂರು

ಮೈಸೂರ್ನಲ್ಲಿ ಇರೋವಷ್ಟು ದಿನ ಮುಸ್ಸ೦ಜೆ, ರಾತ್ರಿ, ಮಧ್ಯರಾತ್ರಿ ಹೊತ್ತಿನ ಮುಹೂರ್ತಗಳು ನಾನ್ ಕ೦ಡಿಲ್ಲ.

ನನಗೆ ಇದರ ಬಗ್ಗೆ ತಿಳಿವಿಲ್ಲ.  ಈ ಬಗ್ಗೆ ತಿಳಿದವರು ತಿಳಿಸುತ್ತೀರಾ?

~ by krishna Raj on August 22, 2008.

2 Responses to “ಇದೇನಿದು ಮುಸ್ಸ೦ಜೆ, ರಾತ್ರಿ ಮತ್ತೂ ಮಧ್ಯರಾತ್ರಿ ಹೊತ್ತಿನ ಶುಭಮುಹೂರ್ತಗಳು ಆ೦ಧ್ರ ಪ್ರದೇಶದಲ್ಲಿ?”

  1. ಮೊದಲೆಲ್ಲಾ ಮದುವೆಯ ಮುಹೂರ್ತ ನಮ್ಮ ಅನುಕೂಲಕ್ಕೆ ಇರಲಿಲ್ಲ. ಮದುವೆ ಮುಹೂರ್ತಕ್ಕೆ ಅನುಗುಣವಾಗಿ ನಾವು ಅನುಕೂಲ ಕಲ್ಪಿಸಿಕೊಳ್ಳಬೇಕಾಗಿತ್ತು. ಈಗ ಮದುವೆಗಳೆಲ್ಲಾ ಭಾನುವಾರದಂದೇ ನಡೆಸಲು ಇಷ್ಟಪಡುತ್ತಾರೆ. ಅಥವಾ ಮಕ್ಕಳು ಮರಿಗಳಿಗೆ ರಜಾ ಇದ್ದ ತಿಂಗಳುಗಳನ್ನು ಹುಡುಕಿಕೊಳ್ಳುತ್ತಾರೆ. ಎಲ್ಲಕ್ಕೂ ಮುಖ್ಯವಾಗಿ ಕಲ್ಯಾಣಮಂಟಪ ಸಿಕ್ಕದಿನವೇ ಮದುವೆ ಮುಹೂರ್ತ.
    ಕರ್ನಾಟಕದಲ್ಲೂ ರಾತ್ರೆ ಮದುವೆಗಳಿದ್ದವು. ಸಾಮಾನ್ಯವಾಗಿ ಹವ್ಯಕ ಬ್ರಾಹ್ಮಣರಲ್ಲಿ ರಾತ್ರೆ ಮದುವೆ ಸಾಮಾನ್ಯವಾಗಿತ್ತು. ೧೯೭೫ ರಲ್ಲಿ ನಮ್ಮ ಮನೆಯಲ್ಲೇ ನನ್ನ ಸಹೋದರಿಯ ಮದುವೆ ನಡೆದಿದ್ದು ಮಧ್ಯರಾತ್ರೆಯಲ್ಲೇ. ನನಗೆ ಗೊತ್ತಿರುವಂತೆ ಮಂಗಳವಾರ ನಡೆಯುವ ಮದುವೆಗಳು ರಾತ್ರೆಮದುವೆಗಳಾಗಿದ್ದವು.
    ಹಾಗಾದರೆ ಮದುವೆ ಊಟ ಯಾವಾಗ? ಗಟ್ಟದ ಕೆಳಭಾಗದ ಜನರು ಮರುದಿನ ಮದುವೆ ಊಟ ಇಟ್ಟುಕೊಂಡರೆ ಮಲೆನಾಡಿನ ಜನರ ರಾತ್ರೆಯೇ ಇಟ್ಟುಕೊಳ್ಳುತ್ತಿದ್ದರು. ಮಧ್ಯರಾತ್ರೆಯವರೆಗೂ ಉಪವಾಸವೇ? ಖಂಡಿತ ಇಲ್ಲ.ಹವ್ಯಕರಲ್ಲಿ ಮಾಂಗಲ್ಯದ ಸಮಯದಲ್ಲಿ ನೆಂಟರ ಹಾಜರಾತಿ ಮುಖ್ಯವಲ್ಲ . ಊಟದ ಸಮಯದಲ್ಲಿ ಹಾಜರ್ ಆಗಿರಲೇ ಬೇಕು. ’ಭಾವಾ ಆಂ ಮನೀಗ ಹೋಗ್ತ್ನ’(ನಾನು ಮನೆಗೆ ಹೋಗುತ್ತೇನೆ) ಎಂದು ನೆಂಟನೆಂದರೆ ಮನೆಯಾತನು ಉತ್ತರವಿಲ್ಲ. ಪ್ರಶ್ನೆ’ನಿಂದು ಉಂಡಾತ?’ (ನಿನ್ನದು ಊಟವಾಯಿತೇ?) ’ಅಂಗಾರ ಹೋಗು’ (ಹಾಗಾದರೆ ಹೋಗು)-ಕತ್ತಲು ರಾತ್ರೆಯಲ್ಲಿ ಸೀಮೆ ಎಣ್ಣೆಯಲ್ಲಿ ಉರಿಯುತ್ತಿದ್ದ ಗ್ಯಾಸ್ ಲೈಟ್ ಬೆಳಕಿನಲ್ಲಿ! ನಿದ್ರೆಗಣ್ಣಿನಲ್ಲಿ ಮದುವೆ! ಎಚ್ಚರ ಇರುವವರು ಮದುಮಗ ಮದುಮಗಳು ಹಾಗೂ ಪುರೋಹಿತರು.

  2. ಆಂಧ್ರ ಪ್ರದೇಶಕ್ಕೆ ಸೇರಿದ ನನ್ನ ಸಹೋದ್ಯೋಗಿಯೊಬ್ಬರ ಮದುವೆ ಮುಹೂರ್ತ ರಾತ್ರಿ ೧೨.೩೦/೧ ಗಂಟೆಗೆ ಇಡಲಾಗಿತ್ತು;ಗೋಧೂಳಿ ಲಗ್ನಗಳನ್ನು ಮಾತ್ರ ಕೇಳಿದ್ದ ನನಗೆ ಇದೇನು ಅವೇಳೆಯಲ್ಲಿ ಮದುವೆ ಮಾಡ್ತಾರೆ ಎಂದು ಅಚ್ಚರಿಯಾಗಿತ್ತು.ಅಲ್ಲಿ ಇದು ಮಾಮೂಲೇನೋ?

Leave a Reply